ಮುಖಪುಟ |ನಮ್ಮನ್ನು ಸಂಪರ್ಕಿಸಿ |English

ಸಂಕ್ಷಿಪ್ತ ಹಿತಿಹಾಸ :

ಕರ್ನಾಟಕ ರಾಜ್ಯವು ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಕೇಂದ್ರ ಭಾಗದಲ್ಲಿರುತ್ತದೆ. ಇದರ ವಿವಿಧ ಅದ್ಭುತಗಳಾದ ಸ್ಥಳಾಕೃತಿ ಅಭಿವ್ಯಕ್ತಿಗಳು, ಅನನ್ಯ ಒಳಚರಂಡಿ ಮಾದರಿಗಳು, ವನ್ಯಜೀವಿ ವರ್ಣರಂಜಿತ ಪರಂಪರೆ, ವಿಶೇಷ ಘಟನೆಗಳುಳ್ಳ ಇತಿಹಾಸ, ಸಮೃದ್ಧ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ನಿರಂತರ ನೀಳನೋಟದ ದೃಶ್ಯ ಶ್ರೇಷ್ಠತೆಗಳೊಂದಿಗೆ ಕರ್ನಾಟಕ ಖಂಡಿತವಾಗಿಯೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪತ್ತಿಗೆ ಅನನ್ಯ ಕೊಡುಗೆಗಳನ್ನು ನೀಡಿದೆ. ಇದು "ಕರ್ನಾಟಕ" ಸಂಗೀತ ಎಂಬ ಸಂಗೀತದ ಒಂದು ವಿಧವನ್ನು ಅಭಿವೃದ್ಧಿಪಡಿಸಿದ್ದು, ಭಾರತದಾದ್ಯಾಂತ ಹರಡಿದೆ.

ಕರ್ನಾಟಕ ರಾಜ್ಯವು 11 ಡಿಗ್ರಿ 31' ಮತ್ತು 18 ಡಿಗ್ರಿ 45' ಉತ್ತರ ಅಕ್ಷಾಂಶ ಮತ್ತು 74 ಡಿಗ್ರಿ 12 'ಮತ್ತು 78 ಡಿಗ್ರಿ 40' ಪೂರ್ವ ರೇಖಾಂಶಗಳ ನಡುವೆ ನೆಲೆಗೊಂಡಿದ್ದು, ಭಾರತದ ಪರ್ಯಾಯದ್ವೀಪದ ಪಶ್ಚಿಮ ಕೇಂದ್ರ ಭಾಗದಲ್ಲಿದೆ. ಉತ್ತರದಿಂದ ದಕ್ಷಿಣಕ್ಕೆ ಅದರ ಗರಿಷ್ಠ ಉದ್ದ ಸುಮಾರು 700 ಕಿ.ಮೀ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 400 ಕಿ.ಮೀ ಆಗಿದೆ. ಇದರ ಉತ್ತರಕ್ಕೆ ಮಹಾರಾಷ್ಟ್ರ ರಾಜ್ಯ, ವಾಯುವ್ಯದಲ್ಲಿ ಗೋವಾ, ಪೂರ್ವಕ್ಕೆ ಆಂಧ್ರ ಪ್ರದೇಶ, ದಕ್ಷಿಣ ಮತ್ತು ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಇರುತ್ತದೆ.

ಕರ್ನಾಟಕ ರಾಜ್ಯ 1,92,204 ಚ.ಕಿ. ಮೀ ವಿಸ್ತೀರ್ಣವನ್ನು ಮತ್ತು ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ 5.35% ಭಾಗವನ್ನು ಆಕ್ರಮಿಸಿದೆ. 1881 ರಲ್ಲಿ 7 ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಕೋಲಾರ, ಕಡೂರು, ತುಮಕೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಮಾತ್ರ ಒಳಗೊಂಡಿತ್ತು. 1886 ರಲ್ಲಿ, ಏಳು ತಾಲ್ಲೂಕುಗಳನ್ನೊಳಗೊಂಡ ಹಾಸನವನ್ನು ಎಂಟನೇ ಜಿಲ್ಲೆಯಾಗಿ ಮತ್ತು 1939 ರಲ್ಲಿ, ಏಳು ತಾಲ್ಲೂಕುಗಳನ್ನೊಳಗೊಂಡ ಮಂಡ್ಯವನ್ನು ರಾಜ್ಯದ ಒಂಬತ್ತನೇ ಜಿಲ್ಲೆಯಾಗಿ ಸೇರಿಸಿಕೊಳ್ಳಲಾಗಿತ್ತು.

ಪ್ರಸ್ತುತ ರಾಜ್ಯವು, ರಾಜ್ಯಗಳ ಪುನರ್ ರಚನಾ ಕಾಯಿದೆ 1956 ರ ಅಡಿಯಲ್ಲಿ ನವೆಂಬರ್ 1, 1956 ರಲ್ಲಿ ರಚನೆಯಾಯಿತು.

ರಾಜ್ಯವು ಮೈಸೂರು, ಬೆಂಗಳೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗ ಎಂಬ ನಾಲ್ಕು ವಿಭಾಗಗಳನ್ನು ಹೊಂದಿದೆ. ಮೈಸೂರು ವಿಭಾಗವು 8 ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದ್ದು. ಇದು 13 ಉಪ ವಿಭಾಗಗಳು, 44 ತಾಲ್ಲೂಕುಗಳು, 6 ವಿಶೇಷ ತಾಲ್ಲೂಕುಗಳನ್ನು ಒಳಗೊಂಡಿದೆ. 15.8.1997 ರಿಂದ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಇಬ್ಭಾಗಿಸಿ ಕ್ರಮವಾಗಿ ಚಾಮರಾಜನಗರ ಮತ್ತು ಉಡುಪಿ ಜಿಲ್ಲೆಯನ್ನಾಗಿ ಮಾಡಲಾಗಿದೆ.

Designed and Hosted by :
 National Informatics Centre

>> ಮರುಮಾಹಿತಿ
Regional Commissioner Office Mysuru
“ HIGH VIEW ”, Vinoba Road, Opposite Kalamandir,
Mysuru – 57 0005. Karnataka State.
ನಿಬಂಧನೆ ಹಾಗೂ ಷರತ್ತುಗಳು | ಮಾರ್ಗ ನಕ್ಷೆ