ಮುಚ್ಚಿ

    ಜಿಲ್ಲಾಧಿಕಾರಿ

    ಜಿಲ್ಲಾಧಿಕಾರಿಯವರ ಅಧಿಕಾರಗಳು

    ಜಿಲ್ಲೆಗಳು ರಾಜ್ಯ ಮಟ್ಟದ ನಂತರದ ಪ್ರಧಾನ ಆಡಳಿತ ಘಟಕವಾಗಿರುತ್ತದೆ, ಇದು ಕಂದಾಯ ಇಲಾಖೆ ಮಾತ್ರವಲ್ಲದೇ ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಇಲಾಖೆಗಳ ಆಡಳಿತ ಘಟಕವಾಗಿಯೂ ಇರುತ್ತದೆ, ಆಡಳಿತ ಸುಧಾರಣಾ ಆಯೋಗದಿಂದ ನೇಮಕವಾದ ಜಿಲ್ಲಾ ಆಡಳಿತ ಅಧ್ಯಯನದ ವರದಿಯ ರೀತ್ಯಾ ಜಿಲ್ಲೆಯ ಭೌಗೋಳಿಕ ಪ್ರದೇಶ ಆಡಳಿತ ಯಂತ್ರಕ್ಕೆ ಹೆಚ್ಚು ಅನುಕೂಲವಾಗಿ ಸಾರ್ವಜನಿಕರೊಂದಿಗೆ ನೇರಸಂಪರ್ಕಕ್ಕೆ ಕೇಂದ್ರೀಕೃತವಾಗಿರುತ್ತದೆ. ಎಲ್ಲಾ ಇಲಾಖೆಗಳ ಒಟ್ಟಾರೆ ಮೇಲ್ವಿಚಾರಣೆ ಮತ್ತು ಕೆಲವು ಕೇಂದ್ರ ಸರ್ಕಾರದ ವ್ಯವಹಾರಗಳನ್ನು ಆಡಳಿತ ಯಂತ್ರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬಹುದಾಗಿದೆ.
    ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರಾಗಿದ್ದು ಬಹುಶಃ ಜಿಲ್ಲಾಧಿಕಾರಿಗಳೊಬ್ಬರೆ ಕೇಂದ್ರ ಮತ್ತು ರಾಜ್ಯಗಳ ಬಹುಸಂಖ್ಯೆಯ ಕಾನೂನುಗಳನ್ನು ಚಲಾಯಿಸಲು ಅಧಿಕಾರ ಹೊಂದಿರುತ್ತಾರೆ.
    ಜಿಲ್ಲಾ ಆಡಳಿತದ ಸಂಕ್ಷಿಪ್ತ ಕಾರ್ಯ ಈ ಕೆಳಕಂಡಂತೆ ಇರುತ್ತದೆ.
    1) ಕಾನೂನು ಸುವ್ಯವಸ್ಥೆ ಮತ್ತು ದಂಡಾಧಿಕಾರ ವಿಷಯಗಳು :-
    ಮೊದಲ ಹಂತದಲ್ಲಿ ಸಾರ್ವಜನಿಕ ರಕ್ಷಣೆ ಮತ್ತು ಶಾಂತಿ ಕಾಪಾಡುವ ಕಾರ್ಯ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಪೊಲೀಸ್ ಅಧೀಕ್ಷಕರೊಡನೆ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ದಂಡಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಬಂದಿಖಾನೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಬೇರೆ ಇಲಾಖೆ ಇದ್ದರೂ ಸಹ ಜಿಲ್ಲೆಗಳ ಬಂದಿಖಾನೆಗಳ ಸಾಮಾನ್ಯ ಉಸ್ತುವಾರಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುತ್ತದೆ.

    2) ಭೂ ಕಂದಾಯ :- ಎರಡನೇ ಹಂತದಲ್ಲಿ ಕಂದಾಯ ಆಡಳಿತ ಅಧಿಕಾರ, ಪ್ರಮುಖವಾಗಿ ಭೂದಾಖಲೆಗಳ ನಿರ್ವಹಣೆ, ಭೂ ಕಂದಾಯ ನಿಗಧಿ ಮತ್ತು ವಸೂಲಾತಿ ಹಾಗೂ ಸಾರ್ವಜನಿಕರಿಂದ ಇತರೆ ಸರ್ಕಾರಿ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಘೋಷಿಸಿ ವಸೂಲಾತಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳು, ಪದನಿಮಿತ್ತ ಕಂದಾಯ ಅಧಿಕಾರಿಯಾಗಿ ವಿವಿಧ ಕಾನೂನುಗಳ ವ್ಯಾಪ್ತಿಯಲ್ಲಿ ಭೂ ದಾಖಲೆಗಳ ಸಂಬಂಧ ವ್ಯಾಜ್ಯಗಳ ನಿರ್ವಹಣೆ ಸರ್ಕಾರಿ ಆಸ್ತಿ ಮತ್ತು ಭೂಮಿ ಸಂರಕ್ಷಣೆಗಳ ನಿರ್ವಹಣಾ ಅಧಿಕಾರ ಹೊಂದಿರುತ್ತಾರೆ. ಇತರೆ ಕಂದಾಯಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ಉಪತಹಶೀಲ್ದಾರರು ಭೂ ವಿವಾದಗಳ ನಿರ್ವಹಣಾ ಕಾರ್ಯ ನಿರ್ವಹಿಸುವವರಿದ್ದು ಇವರುಗಳು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಮತ್ತು ಅಧೀನದಲ್ಲಿರುತ್ತಾರೆ.

    3) ಅಭಿವೃದ್ಧಿ :- ಕಂದಾಯ ಇಲಾಖೆಯಿಂದ ಅನುಷ್ಠಾನಗೊಳ್ಳುವ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷ ಚೇತನರ ವೇತನ, ಸಂದ್ಯಾ ಸುರಕ್ಷಾ, ಓSಂP, ಆದರ್ಶ ವಿವಾಹ, ಅಂತ್ಯ ಸಂಸ್ಕಾರ, ಯೋಜನಾ ಪುನರ್ವಸತಿ ಇತ್ಯಾದಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ.

    ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಮತ್ತು ಜಿಲ್ಲಾ ಯೋಜನೆಗಳ ಸಿದ್ಧತೆಯ ಜವಾಬ್ದಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯ ಅನುಷ್ಠಾನದಲ್ಲಿ ಸಮನ್ವಯ ಮತ್ತು ವಿಪತ್ತಿನಿಂದ ರಕ್ಷಣೆ ಮತ್ತು ಅದರ ಪರಿಣಾಮಗಳ ತಗ್ಗಿಸುವಿಕೆಯಲ್ಲಿ ಎಲ್ಲಾ ಅಗತ್ಯ ಕಾರ್ಯನಿರ್ವಹಣೆ ಜವಾಬ್ದಾರಿ ಹೊಂದಿರುತ್ತಾರೆ.

    ಲೋಕಸಭಾ ಚುನಾವಣೆಗಳ ಸಂಬಂಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿ ಮತ್ತು ಪದನಿಮಿತ್ತ ಚುನಾವಣಾ ಅಧಿಕಾರಿಯಾಗಿ (ರಿಟರ್ನಿಂಗ್ ಅಧಿಕಾರಿ) ಕಾರ್ಯನಿರ್ವಹಿಸುತ್ತಾರೆ.

    4) ಇತರ ಕಾರ್ಯಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ :

    1. ಚುನಾವಣೆ ಮತ್ತು ಚುನಾವಣಾ ಮತದಾರರ ನೋಂದಣಿ
    2. ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಅಗತ್ಯ ವಸ್ತುಗಳ ನಿಯಂತ್ರಣ, ನಿರ್ಬಂಧ ಮತ್ತು ವಿತರಣೆ
    3. ಅಬಕಾರಿ ಮತ್ತು ನಿಷೇಧದ ವಿಷಯಗಳು
    4. ಮುದ್ರಾಂಕ ಮತ್ತು ನೋಂದಣಿಗೆ ಸಂಬಂಧಿಸಿದ ವಿಷಯಗಳು
    5. ಪುರಸಭೆಯ ಆಡಳಿತದ ವಿಷಯಗಳು
    6. ಶಿಷ್ಠಾಚಾರ
    7. ನೈಸರ್ಗಿಕ ವಿಪತ್ತುಗಳು ಮತ್ತು ಪರಿಹಾರ ಕ್ರಮಗಳು
    8. ವಿವಿಧ ಯೋಜನೆಗಳ ಅಡಿಯಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳ ಪುನರ್ವಸತಿ.(ಯೋಜನಾ ನಿರಾಶ್ರಿತರ ಪುನರ್ವಸತಿ)
    9. ನಗರ ಭೂ ಪರಿಮಿತಿಗೆ ಸಂಬಂಧಿಸಿದ ವಿಷಯಗಳು
    10. ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಷಯಗಳು
    11. ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳು
    12. ಭೂ ಸುಧಾರಣೆಗಳು
    13. ಅರಣ್ಯಕ್ಕೆ ಸಂಬಂಧಿಸಿದ ವಿಷಯಗಳು
    14. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ
    15. ಜನಗಣತಿ
    16. ಸಾರ್ವಜನಿಕ ಕುಂದುಕೊರತೆಗಳು
    17. ನೀರಾವರಿ ವಿಷಯಗಳು
    18. ಜಿಲ್ಲಾ ಮಟ್ಟದಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬ ಮತ್ತು ಉತ್ಸವಗಳನ್ನು ಆಯೋಜಿಸುವುದು ಮತ್ತು ನಡೆಸುವುದು

    ವಿವಿಧ ಕಾಯ್ದೆಗಳು ಮತ್ತು ನಿಯಮಗಳ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು :

    1. ಕರ್ನಾಟಕ ಗೃಹ ನಿವೇಶನಗಳ ಭೂಸ್ವಾಧೀನ ಕಾಯ್ದೆ 1972
    2. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯ್ದೆ 1966 ಮತ್ತು ನಿಯಮಗಳು
    3. ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1961
    4. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು
      ಅವಶೇಷಗಳ ಕಾಯ್ದೆ 1961
    5. ಕರ್ನಾಟಕ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ ಕಾಯ್ದೆ 1980
    6. ಕರ್ನಾಟಕ ಋಣ ಪರಿಹಾರ ಅಧಿನಿಯಮ 1980
    7. ಕರ್ನಾಟಕ ನೀರಾವರಿ ಕಾಯ್ದೆ 1965
    8. ಕರ್ನಾಟಕ ಅಬಕಾರಿ ಕಾಯ್ದೆ 1965
    9. ಕರ್ನಾಟಕ ಮುದ್ರಾಂಕ ಕಾಯ್ದೆ 1957 ಮತ್ತು ನಿಯಮಗಳು 1958
    10. ಕರ್ನಾಟಕ ಆರೋಗ್ಯ ಸೆಸ್ ಕಾಯ್ದೆ 1962
    11. ಕರ್ನಾಟಕ ಗೃಹರಕ್ಷಕ ದಳ ಅಧಿನಿಯಮ 1962
    12. ಕರ್ನಾಟಕ ಕಾನೂನು ನೆರವು ಜಿಲ್ಲೆ ಮತ್ತು ತಾಲ್ಲೂಕು ಸಮಿತಿಗಳ ಯೋಜನೆಗಳು 1983
    13. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಜಮೀನುಗಳ ಪರಭಾರೆ ನಿಷೇಧ ಕಾಯ್ದೆ 1978 ಮತ್ತು ನಿಯಮಗಳು 1979
    14. ಕರ್ನಾಟಕ ಗ್ರಾಮ ಅಧಿಕಾರಿಗಳ ರದ್ದತಿ ಕಾಯ್ದೆ 1961 ಮತ್ತು ನಿಯಮಗಳು
    15. ಕರ್ನಾಟಕ ವೃಕ್ಷ ಸಂರಕ್ಷಣೆ ಕಾಯ್ದೆ 1976
    16. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965
    17. ಕರ್ನಾಟಕ ಅರಣ್ಯ ಕಾಯ್ದೆ ಮತ್ತು ನಿಯಮಗಳು
    18. ಕರ್ನಾಟಕ ಪುರಸಭೆ ಕಾಯ್ದೆ
    19. ಕರ್ನಾಟಕ ನಿಕ್ಷೇಪನಿಧಿ ಅಧಿನಿಯಮ
    20. ಕರ್ನಾಟಕ ಭೂ ಕಂದಾಯ ಕಾಯ್ದೆ 1964
    21. ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961
    22. ಪೋಷಕರು ಮತ್ತು ಪಾಲಕರ ಕಾಯ್ದೆ
    23. ಭಾರತೀಯ ನೋಂದಣಿ ಕಾಯ್ದೆ
    24. ಭಾರತೀಯ ಉನ್ಮತ್ತತೆ ಕಾಯ್ದೆ
    25. ವನ್ಯಜೀವಿ ಸಂರಕ್ಷಣಾ ಕಾಯ್ದೆ
    26. ಮೋಟಾರು ವಾಹನ ಕಾಯ್ದೆ
    27. ಕರ್ನಾಟಕ ಜಾನುವಾರು ಅತಿಕ್ರಮ ಪ್ರವೇಶ ಕಾಯ್ದೆ
    28. ಕರ್ನಾಟಕ ರೂಢಿಗತ ಅಪರಾಧಿಗಳ ಕಾಯ್ದೆ
    29. ಕರ್ನಾಟಕ ಪೆÇಲೀಸ್ ಕಾಯ್ದೆ
    30. ಕರ್ನಾಟಕ ಆಸ್ತಿಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ತಡೆ ಕಾಯ್ದೆ
    31. ಕರ್ನಾಟಕ ಕಾರಾಗೃಹ ಕಾಯ್ದೆ
    32. ಕರ್ನಾಟಕ ಪಟ್ಟಣ ಮತ್ತು ನಗರ ಯೋಜನೆ ಕಾಯ್ದೆ
    33. ಕರ್ನಾಟಕ ಸಿನೆಮಾ ನಿಯಂತ್ರಣ ಕಾಯ್ದೆ
    34. ಕರ್ನಾಟಕ ಭಿಕ್ಷಾಟನೆ ನಿμÉೀಧ ಕಾಯ್ದೆ
    35. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ
    36. ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ
    37. ವಿಷ ವಸ್ತುಗಳ ಅಧಿನಿಯಮ
    38. ಅಧಿಕೃತ ರಹಸ್ಯ ಕಾಯ್ದೆ
    39. ಪೆಟ್ರೋಲಿಯಂ ನಿಯಮಗಳು
    40. ಸ್ಫೋಟಕ ಕಾಯ್ದೆ
    41. ಪುಸ್ತಕಗಳ ಕಾಯ್ದೆ ಪತ್ರಿಕಾ ಮತ್ತು ನೋಂದಣಿ (ಮುದ್ರಣ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ)
    42. ಜೀತ ಕಾರ್ಮಿಕ ನಿರ್ಮೂಲನೆ ಕಾಯ್ದೆ
    43. ಜನತಾ ಪ್ರಾತಿನಿಧ್ಯ ಕಾಯ್ದೆ
    44. ಇನಾಂ ರದ್ಧಿಯಾತಿ ಕಾಯ್ದೆ

    ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.