ಮುಚ್ಚಿ

    ಉಪ ತಹಶೀಲ್ದಾರ್

    ಉಪ ತಹಶೀಲ್ದಾರ್

    ನಾಡಕಛೇರಿ ವ್ಯವಸ್ಥೆಯಲ್ಲಿ ಉಪ ತಹಶೀಲ್ದಾರರು (ರಾಜಸ್ವ ನಿರೀಕ್ಷಕರಿಂದ ಉನ್ನತೀಕರಿಸಿದ ಮತ್ತು ಶಿರಸ್ತೇದಾರ್ ವೃಂದ) ಕಛೇರಿ ಮುಖ್ಯಸ್ಥರಾಗಿರುತ್ತಾರೆ. ಅವರ ಕಛೇರಿ ವ್ಯವಸ್ಥೆಯಲ್ಲಿ ಒಂದು ದ್ವಿ.ದ.ಸ, ಒಂದು ಬೆರಳಚ್ಚುಗಾರ ಮತ್ತು ಒಂದು ಡಿ ದರ್ಜೆ ನೌಕರವೃಂದ ಒಳಗೊಂಡಿದೆ. ನಾಡ ಕಛೇರಿ ವ್ಯವಸ್ಥೆಯಲ್ಲಿ ಉಪ ತಹಶೀಲ್ದಾರ್ ರವರಿಗೆ ಹಲವು ಅಧಿಕಾರಗಳನ್ನು ಪ್ರತ್ಯಾಯೋಜಿಸಲಾಗಿದೆ.
    ಪ್ರತಿ ತಾಲ್ಲೂಕಿನಲ್ಲಿ ಶಿರಸ್ತೇದಾರ್ ಮತ್ತು ಉಪ ತಹಶೀಲ್ದಾರ್‍ಗಳನ್ನು ತಹಶೀಲ್ದಾರ್‍ರವರಿಗೆ ಸಹಾಯಕರಾಗಿ ನೇಮಕ ಮಾಡಲಾಗಿದೆ. ಪಹಣಿ ಪತ್ರಿಕೆಗಳ ತಯಾರಿ ಹಂತ ಅಥವಾ ನಿರ್ವಹಣೆಯಲ್ಲಿ ಉದ್ಭವಿಸುವ ವಿವಾದಾಸ್ಪದ ಪ್ರಕರಣಗಳ ನಿರ್ವಹಣೆ ಜವಾಬ್ದಾರಿ ಶಿರಸ್ತೇದಾರರು ಅಥವಾ ಕಂದಾಯ ಇಲಾಖೆಯ ತತ್ಸಮಾನ ಅಧಿಕಾರಿಗಳಿಗೆ ಕರ್ನಾಟಕ ಭೂ ಕಂದಾಯ ನಿಯಮಗಳು 1966 ರ ನಿಯಮ 43 ಮತ್ತು 67 ರಡಿ ದತ್ತವಾಗಿರುತ್ತದೆ. ಉಪ ತಹಶೀಲ್ದಾರರು ನಾಡಕಛೇರಿಯ ಅಧಿಕಾರಿಯಾಗಿಯೂ ಸೆಕ್ಷನ್ 94 ರ ಅನ್ವಯ ಸರ್ಕಾರಿ ಜಮೀನುಗಳ ಒತ್ತುವರಿ ಪ್ರಕರಣಗಳ ವಿಲೇವಾರಿ ಜವಾಬ್ದಾರಿ ಹೊಂದಿರುತ್ತಾರೆ.

    ತಹಶೀಲ್ದಾರ್ ಅವರ ಈ ಕೆಳಗಿನ ಅಧಿಕಾರಗಳನ್ನು “ನಾಡ ಸಿಸ್ಟಮ್” ಅಡಿಯಲ್ಲಿ ಉಪ ತಹಶೀಲ್ದಾರರಿಗೆ ವಹಿಸಲಾಗಿದೆ: –

    1. ವೃದ್ಧಾಪ್ಯ ವೇತನ ಮಂಜೂರು
    2. ವಿಶೇಷ ಚೇತನರಿಗೆ ವೇತನ ಮಂಜೂರು
    3. ವಿಧವಾ ವೇತನ ಮಂಜೂರು
    4. ಸಂಧ್ಯಾ ಸುರಕ್ಷ ಮಂಜೂರಾತಿ
    5. ಸರ್ಕಾರದ ಬಾಕಿ ವಸೂಲಿ ಮತ್ತು ಜಮೆ ಮತ್ತು ಡಿ.ಸಿ.ಬಿ ನಿರ್ವಹಣೆ
    6. ಟಿ.ಟಿ ದಂಡ ವಿಧಿಸುವುದು
    7. ಹಕ್ಕು ಬದಲಾವಣೆ ಪ್ರಕರಣಗಳ ವಿಲೇವಾರಿ
    8. ಕರ್ನಾಟಕ ನೀರಾವರಿ ಕಾಯ್ದೆ, 1965 ರ ಅಡಿಯಲ್ಲಿ ನೀರಿನ ದರ ಮತ್ತು ನಿರ್ವಹಣಾ ಕರ
    9. ಪ್ರಮಾಣೀಕೃತ ಪ್ರತಿಗಳ ವಿತರಣೆ
    10. ಬೋನಫೈಡ್ ಅಗ್ರಿಕಲ್ಚರಲ್ ಪ್ರಮಾಣೀಕೃತ ಪ್ರತಿಗಳು
    11. ಮುಜರಾಯಿ ಸಂಸ್ಥೆಗಳ ನಿರ್ವಹಣೆ
    12. ದರಖಾಸ್ತು ದಾಖಲೆಗಳನ್ನು ಸಿದ್ಧಪಡಿಸುವುದು
    13. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರÀ ಮೇಲ್ವಿಚಾರಣೆ
    14. ಸರ್ಕಾರಿ ಜಮೀನುಗಳ ರಕ್ಷಣೆ

    ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.