ಪ್ರಾದೇಶಿಕ ಆಯುಕ್ತರು

ಶ್ರೀ. ರಮೇಶ್ ಡಿ ಎಸ್, ಭಾ.ಆ.ಸೇ
ಪ್ರಾದೇಶಿಕ ಆಯುಕ್ತರ ಕಛೇರಿ ಕುರಿತು
” ಹೈ ವ್ಯೂ”, 1894ರಲ್ಲಿ 15 ಎಕ್ರೆ ಭೂಮಿಯಲ್ಲಿ ಕಟ್ಟಲ್ಪಟ್ಟಿರುವ ಒಂದು ಅಂತಸ್ತಿನ ಕಟ್ಟಡವಾಗಿದ್ದು ಸುತ್ತಲೂ ವಿಶಾಲವಾದ ತೋಟವನ್ನು ಹೊಂದಿದೆ. ಸದರಿ ಕಟ್ಟಡವು 1920 ರಲ್ಲಿ ಕರ್ನಲ್. ಟಿ.ಜೆ. ಮ್ಯಾಕ್ ಗನ್ನ್ ರವರ ನಿವಾಸವಾಗಿತ್ತು. 1956 ರಿಂದ ಸದರಿ ಕಟ್ಟಡವು ಮೈಸೂರು ವಿಭಾಗಾಧಿಕಾರಿಗಳ ಕಛೇರಿಯಾಗಿದ್ದು, ಪ್ರಸ್ತುತ ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರವರ ಕಛೇರಿಯಾಗಿರುತ್ತದೆ. ಭಾರವಾದ ಹಂದರದ ಹಜಾರೆ/ ಮುಖಮಂಟಪ, ವಿವಿಧ ವಿನ್ಯಾಸದ ದಂಡೆಗಳು, ಎತ್ತರದ ಗೋಡೆ, ಚಂದಾಯ ಛಾವಣಿ, ಮರಕೆಲಸದ ಚಜ್ಜಗಳು ಮತ್ತು ಮರದ ಲೂವರ್ ನ ಕಿಟಕಿಗಳು ಹಾಗೂ ಹಿಂದಿನ ಕಾಲಮಾನದ ಬಂಗಲೆಗಳ ವಿಶಿಷ್ಟ ಲಕ್ಷಣಗಳನ್ನು ಇಲ್ಲಿ ನೋಡಬಹುದು.
ಮತ್ತಷ್ಟು ಓದುಪ್ರಾದೇಶಿಕ ಆಯುಕ್ತರ ಕಛೇರಿ
