ಮುಚ್ಚಿ

    ಉಪ ವಿಭಾಗಾಧಿಕಾರಿ

    ಉಪ ವಿಭಾಗಾಧಿಕಾರಿಗಳು

    ಜಿಲ್ಲೆಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಿರ್ಧಿಷ್ಟ ಪಡಿಸಿದ ತಾಲ್ಲೂಕುಗಳ ವ್ಯಾಪ್ತಿಗೆ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು ಉಪ ವಿಭಾಗಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಇತರ ರಾಜ್ಯ ಕಾನೂನುಗಳ ವ್ಯಾಪ್ತಿಯಲ್ಲಿ ಉಪ ವಿಭಾಗಾಧಿಕಾರಿಗಳು ಉಪ ವಿಭಾಗ ವ್ಯಾಪ್ತಿಯಲ್ಲಿ, ಜಿಲ್ಲಾಧಿಕಾರಿಗಳ ಅಧಿಕಾರವನ್ನು ಚಲಾಯಿಸುತ್ತಾರೆ. ಅಧೀನ ಅಧಿಕಾರಿಗಳು ನಿರ್ವಹಿಸುವ ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು ಮೊದಲನೇ ಮೇಲ್ಮನವಿ ಪ್ರಾಧಿಕಾರಿಯಾಗಿರುತ್ತಾರೆ. ಅಲ್ಲದೇ ಸೆಕ್ಷನ್ 56 ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಅನ್ವಯ ಪುನರಾವಲೋಕನ ಅಧಿಕಾರಿಯಾಗಿರುತ್ತಾರೆ. ಉಪ ವಿಭಾಗಾಧಿಕಾರಿಗಳು ಉಪ ವಿಭಾಗ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಭೂಸ್ವಾಧೀನ ಕಾರ್ಯಗಳನ್ನು ನಿರ್ವಹಿಸುವುದಲ್ಲದೇ ಅವರ ಉಪ ವಿಭಾಗ ವ್ಯಾಪ್ತಿಯ ಒಂದು ಅಥವಾ ಎಲ್ಲಾ ತಾಲ್ಲೂಕಿನ 1961 ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ರಚಿತವಾಗಿರುವ ಭೂ ನ್ಯಾಯಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಉಪ ವಿಭಾಗಾಧಿಕಾರಿಗಳು ಅವರ ಸಾಮಾನ್ಯ ಕೆಲಸ ಕಾರ್ಯಗಳ ಜೊತೆಗೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿಯೂ ಹಾಗೂ ಉಪ ವಿಭಾಗ ಮಟ್ಟದಲ್ಲಿ ಮತದಾರರ ನೊಂದಣಾಧಿüಕಾರಿಯಾಗಿರುತ್ತಾರೆ ಹಾಗೂ ಚುನಾವಣೆ ಸಮಯದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುತ್ತಾರೆ.

    ವಿವಿಧ ರಾಜ್ಯ ಕಾಯ್ದೆಗಳಡಿ ಸಹಾಯಕ ಆಯುಕ್ತರ ಅಧಿಕಾರ ಮತ್ತು ಕರ್ತವ್ಯಗಳು:-

    1. ಕರ್ನಾಟಕ ನೀರಿನ ದರಗಳು ಮತ್ತು ಸೆಸ್ ನಿಯಮಗಳ ನೀರಾವರಿ ವಿಧಿ 1965
    2. ಕರ್ನಾಟಕ ಮುಂದ್ರಾಂಕ ಕಾಯ್ದೆ 1957 ಮತ್ತು ನಿಯಮಗಳು 1958
    3. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಯನ್ನು ಪರಬಾರೆ ನಿಷೇಧ) ಕಾಯ್ದೆ 1978 ಮತ್ತು ನಿಯಮಗಳು 1979
    4. ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ನಿಯಮಗಳು 1969
    5. ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಮತ್ತು ನಿಯಮಗಳು
    6. ಕರ್ನಾಟಕ ಪುರಸಭೆಗಳ ಕಾಯ್ದೆ 1964
    7. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ನಿಯಮಗಳು 1966
    8. ಕರ್ನಾಟಕ ಮೋಟಾರು ವಾಹನ ನಿಯಮಗಳು 1963
    9. ಕರ್ನಾಟಕ ಇನಾಮ್ ರದ್ಧಿಯಾತಿ ಕಾಯ್ದೆಗಳು
    10. ಕರ್ನಾಟಕ ಭೂ ಮಂಜೂರಾತಿ ನಿಯಮ 1969
    11. ಭೂ ಸ್ವಾಧೀನ ಕಾಯ್ದೆ 1894
    12. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕಾಯ್ದೆ 2013
    13. ಕರ್ನಾಟಕ ಹೌಸ್ ಸೈಟ್ ಸ್ವಾಧೀನ ಕಾಯ್ದೆ 1972
    14. ಚುನಾವಣಾ ನೋಂದಣಿ ನಿಯಮಗಳು 1960
    15. ಭಾರತೀಯ ದಂಡಸಂಹಿತೆ ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆ.

    ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.